Path Traversed

The path traversed

The proud Kannada speaking families have been celebrating the heritage and culture of Karnataka in Adelaide since the early 90s. Small community gatherings at friends houses would often involve singing, dancing and jokes, united by the common language.

The Kannadigas of Adelaide have always gelled together and structuring an official organisation was a formality. Despite the unofficial status of Adelaide Kannadigas, the community was strong enough to host humorists Sudha Bargur, Master Hiranaya and sons, playback singers B.R. Chaya and Manjula Gururaj.

As the Kannada speaking population of Adelaide continued to grow, a more systematic approach was required in organizing these cultural events. The Kannada speaking community leaders of the time envisioned a bright future for the Kannadigas of Adelaide, and thus planted the seed to what we see as the AKS today.

The Adelaide Kannada Sangha officially came to fruition on the 10th of June 2006, when playback singer Smt. Manjula Gururaj and humourist Sri. Krishne Gowda launched the organization with their best wishes. Since then, the AKS has accomplished various achievements to be proud of.

ಹಿಂದಣ ಹೆಜ್ಜೆ

ಅಡಿಲೈಡ್ನಲ್ಲಿ, ಕನ್ನಡ ನಡೆನುಡಿಯುಳ್ಳ ಕನ್ನಡಿಗರು, ತಮ್ಮತನವನ್ನ ಹಿರಿಮೆ ಗರಿಮೆಗಳನ್ನ ಸಂಸ್ಕೃತಿ ನಡಾವಳಿಗಳನ್ನ ೯೦ರ ದಶಕದಿಂದಲೇ ನೆನೆಪಿಸಿಕೊಳ್ಳುತ್ತಾ ಆಚರಿಸುತ್ತಾ ಸಂಬ್ರಮಿಸುತ್ತಾ ಬಂದಿದ್ದಾರೆ. ಗೆಳೆಯರ ಮನೆಯ ಹಬ್ಬ-ಹುಟ್ಟುಹಬ್ಬಗಳು, ಊಟೋಪಚಾರಗಳು, ಮಾತುಕಥೆ-ಹರಟೆಗಳು, ಹಾಡು-ಕುಣಿತಗಳು, ನಗೆ-ಗೇಲಿಗಳು ಹೀಗೆ ಹತ್ತು ಹಲವಾರು ಸಂಗತಿಗಳು ಕನ್ನಡಿಗರನ್ನು ಮೊದಲಿಂದಲೂ ಒಬ್ಬರಿಗೊಬ್ಬರಿಗೆ ಬೆಸೆಯುತ್ತಾ ಬಂದಿವೆ.

“ಕನ್ನಡ ಸಂಘ” ಅನ್ನುವ ಈ ಔಪಚಾರಿಕ ಸಂಘಟನೆಯನ್ನು ಕಟ್ಟಿಕೊಳ್ಳದ ದಿನಗಳಲ್ಲೂ ಸಹಾ ಕನ್ನಡ ನಾಡಿನಿಂದ ಸುಧಾ ಬರಗೂರು, ಮಾಸ್ಟರ್ ಹಿರಣ್ಣಯ್ಯ ಬಿ ಆರ್ ಛಾಯಾ, ಮಂಜುಳಾ ಗುರುರಾಜ್ ಮುಂತಾದ ಕನ್ನಡ ಪ್ರತಿಭೆಗೆಳನ್ನ ಕರೆಸಿ ಆಧರಿಸುವಷ್ಟು ಉತ್ಸಾಹ ಈ ಸಮಾಜದಲ್ಲಿತ್ತು.

ಅಡಿಲೈಡ್ ನಲ್ಲಿ ಕನ್ನಡ ನಡೆನುಡಿಯ ಜನಸಂಖೆ ಬೆಳೆದಂತೆ ಕನ್ನಡ ನಾಡು ನುಡಿ ನಡಾವಳಿಯ ಅಭಿವ್ಯಕ್ತಿಗೆ ಒಂದು ವ್ಯವಸ್ತಿತ ಸಂಘಟನೆಯ ರೂಪು ಕೊಡುವ ಅವಶ್ಯಕತೆ ತಲೆದೋರಿತು. ಇದನ್ನು ಅರಿತ, ಕನ್ನಡ ಸಮುದಾಯದ ಮುಂಬರುವ ದಿನಗಳ ಒಳಿತಾಗಿ ಕನ್ನಡದ ಚಿಂತಕ ಮನಸ್ಸುಗಳ ಯೋಚನೆಯ ಕನಸ್ಸಿನ ಫಲವೇ ನಮ್ಮ ಕಣ್ಮುಂದಿರುವ ಈ “ಅಡಿಲೈಡ್ ಕನ್ನಡ ಸಂಘ”.

ಅಡಿಲೈಡ್ ಕನ್ನಡ ಸಂಘವು ವಿಧಿವತ್ತಾಗಿ ೨೦೦೬ ರ ಜೂನ್ ೧೦ ರಂದು, ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಮತ್ತು ಕಲಾವಿದ ಕೃಷ್ಣೇಗೌಡ ಅವರ ಹಾರೈಕೆಗಳೊಂದಿಗೆ ಜನ್ಮ ತಾಳಿತು. ಅಂದಿನಿಂದ ಈ ಕನ್ನಡ ಕೂಟವು ನಾಡು ನುಡಿ ನಡಾವಳಿಗಳ ಒಳಿತಿಗಾಗಿ ಹಲವಾರು ಕೆಲಸ ಮಾಡುತ್ತಾ ಬಂದಿದೆ.